ಬಳಸಬೇಕೆನಿಸುವ ಸಹಿ
ಹೆಸರು ಟೈಪ್ ಮಾಡಿ ಶೈಲಿ ಆರಿಸಿ, ಈಗಾಗಲೇ ಬಳಸುವ ಸಹಿ ಸ್ಕ್ಯಾನ್ ಮಾಡಿ ಅಥವಾ ಬೆರಳಿನಿಂದ ಬರೆಯಿರಿ. ಯಾವುದೇ ದಾಖಲೆಗೆ ಸೇರಿಸಬಹುದಾದ ಸ್ವಚ್ಛ, ಪಾರದರ್ಶಕ PNG ಅನ್ನು Signafy ನೀಡುತ್ತದೆ.
12 ಶೈಲಿಗಳು · ಕಾಗದದಿಂದ ಸ್ಕ್ಯಾನ್ · ಪಾರದರ್ಶಕ PNG
ನಿಮ್ಮ ಸಹಿ ಪಡೆಯಲು ಮೂರು ವಿಧಾನಗಳು
ಖಾಲಿ ಪುಟದಿಂದ, ಪೆನ್ನಿನಿಂದ ಅಥವಾ ಬೆರಳಿನಿಂದ ಆರಂಭಿಸಿ. ಪ್ರತಿ ಸಹಿಯೂ ಒಂದೇ ಸ್ಥಳಕ್ಕೆ ಬರುತ್ತದೆ, ಬಣ್ಣ ಬದಲಿಸಿ ರಫ್ತು ಮಾಡಲು ಸಿದ್ಧ.
ಈ ಮುನ್ನೋಟದಲ್ಲಿ ಆ್ಯಪ್ ಇಂಗ್ಲಿಷ್ನಲ್ಲಿ ಕಾಣುತ್ತದೆ.
-
I
ನಿಮ್ಮ ಹೆಸರಿನಿಂದ ರಚಿಸಿ
ನಿಮ್ಮ ಹೆಸರು ಟೈಪ್ ಮಾಡಿ, ಪೂರ್ಣ ಹೆಸರು, ಮೊದಲ ಹೆಸರು ಅಥವಾ ಮೊದಲಕ್ಷರಗಳನ್ನು ಆರಿಸಿ. 12 ಶೈಲಿಗಳಲ್ಲಿ ಒಂದನ್ನು ಆರಿಸಿ. ಪ್ರತಿ ಬಾರಿಯೂ Signafy ಒಂದು ಸಹಿ ರಚಿಸುತ್ತದೆ. ಹೊಸ ರೂಪಕ್ಕಾಗಿ ಮತ್ತೆ ರಚಿಸಿ.
-
II
ನೀವು ಮಾಡುವ ಸಹಿ ಸ್ಕ್ಯಾನ್ ಮಾಡಿ
ಕಾಗದದಲ್ಲಿ ಸಹಿ ಮಾಡಿ, ಫೋಟೋ ತೆಗೆಯಿರಿ ಅಥವಾ ಫೋಟೋ ಆರಿಸಿ. Signafy ನಿಮ್ಮ ಫೋನ್ನಲ್ಲೇ ಪುಟದಿಂದ ಶಾಯಿಯನ್ನು ಪ್ರತ್ಯೇಕಿಸಿ ಹಿನ್ನೆಲೆ ತೆಗೆಯುತ್ತದೆ. ಸ್ವಚ್ಛ ಗೆರೆಗಳು ಉಳಿಯುತ್ತವೆ.
-
III
ಬರೆಯಿರಿ, ಪರಿಷ್ಕರಿಸಿ
ಬರೆಯುವ ಜಾಗದಲ್ಲಿ ಬೆರಳಿನಿಂದ ಸಹಿ ಮಾಡಿ. ನಿಮ್ಮ ಕೈಬರಹ ಉಳಿಸಿಕೊಂಡು Signafy ಗೆ ನಯಗೊಳಿಸಲು ಬಿಡಿ ಅಥವಾ ಒಂದು ಶೈಲಿಯತ್ತ ಬದಲಿಸಿ.
ಸೊಗಸಾದ ಸಹಿಯಿಂದ ಚುರುಕಿನ ಗೀಚಿನವರೆಗೆ 12 ಶೈಲಿಗಳು
ಪ್ರತಿ ಕಾರ್ಡ್ನಲ್ಲಿ Signafy ಪದ ಆ ಶೈಲಿಯಲ್ಲಿ ಬರೆಯಲಾಗಿದೆ. ನಿಮ್ಮದು ನಿಮ್ಮ ಹೆಸರಿನಲ್ಲಿ, ಪ್ರತಿ ಬಾರಿಯೂ ಹೊಸ ರೂಪದಲ್ಲಿ ಬರುತ್ತದೆ.
ಸೊಗಸಾದ
ಕ್ಯಾಲಿಗ್ರಫಿ
ಸರಳ
ತಮಾಷೆಯ
ಕಲಾತ್ಮಕ
ಕ್ಲಾಸಿಕ್
ಏಕರೇಖೆ
ದಪ್ಪ
ನಿಜವಾದ ದಾಖಲೆಗಳಿಗೆ ಸಿದ್ಧ
ಫಲಿತಾಂಶದ ಪರದೆಯಲ್ಲಿ ಸಹಿ ನೀವು ಬಳಸಬಹುದಾದ ಫೈಲ್ ಆಗುತ್ತದೆ.
-
ಪಾರದರ್ಶಕ ಹಿನ್ನೆಲೆ
PNG ಹಿಂದೆ ಬಿಳಿ ಚೌಕ ಇರುವುದಿಲ್ಲ. ಸಹಿಯ ಗೆರೆಯಲ್ಲಿ ನಿಜವಾದ ಶಾಯಿಯಂತೆಯೇ ಕಾಣುತ್ತದೆ.
-
ಯಾವುದೇ ಶಾಯಿಯ ಬಣ್ಣ
ಕಪ್ಪು, ನೇವಿ ಮತ್ತು ಕೆಂಪಿನ ನಡುವೆ ಬದಲಿಸಿ ಅಥವಾ ಯಾವುದೇ ಬಣ್ಣ ಆರಿಸಿ. ಹೊಸ ಸಹಿ ಬರೆಯದೆ ಆ್ಯಪ್ ಗೆರೆಗಳ ಬಣ್ಣ ಬದಲಿಸುತ್ತದೆ.
-
ತಿಳಿ ಮತ್ತು ಗಾಢ ಹಿನ್ನೆಲೆಯಲ್ಲಿ ನೋಡಿ
ರಫ್ತು ಮಾಡುವ ಮೊದಲು ಬಿಳಿ, ಗಾಢ ಮತ್ತು ಪಾರದರ್ಶಕ ಜಾಲದ ಮೇಲೆ ಸಹಿಯ ಮುನ್ನೋಟ ನೋಡಿ.
-
ಉಳಿಸಿ, ಹಂಚಿಕೊಳ್ಳಿ ಅಥವಾ ಇಟ್ಟುಕೊಳ್ಳಿ
Photos ಅಥವಾ Files ನಲ್ಲಿ ಉಳಿಸಿ, ಬೇರೆ ಆ್ಯಪ್ಗೆ ಹಂಚಿ ಅಥವಾ ಮುಂದಿನ ಸಲಕ್ಕಾಗಿ ನನ್ನ ಸಹಿಗಳು ವಿಭಾಗದಲ್ಲಿ ಇಟ್ಟುಕೊಳ್ಳಿ.
ಜನರು ಇದನ್ನು ಬಳಸುವ ಸ್ಥಳಗಳು
ನಿಮ್ಮ ಸಹಿಯ ಚಿತ್ರ ಸ್ವೀಕರಿಸುವ ಯಾವುದೇ ದಾಖಲೆಯಲ್ಲಿ.
PDF ಗಳು ಮತ್ತು ಫಾರ್ಮ್ಗಳು
PDF ಸಂಪಾದಕದಲ್ಲಿ PNG ಸೇರಿಸಿ, ಮುದ್ರಿಸದೆಯೇ ಬಾಡಿಗೆ ಒಪ್ಪಂದ, ಅನುಮತಿ ಪತ್ರ ಅಥವಾ ಬಿಲ್ಗೆ ಸಹಿ ಮಾಡಿ.
ಇಮೇಲ್ ಸಹಿಗಳು
Mail, Gmail ಅಥವಾ Outlook ನಲ್ಲಿ ನಿಮ್ಮ ಹೆಸರಿನ ಕೆಳಗೆ ಕೈಬರಹದ ಸಹಿ ಸೇರಿಸಿ.
ಪತ್ರಗಳು ಮತ್ತು ದಾಖಲೆಗಳು
Word, Pages ಅಥವಾ Google Docs ನಲ್ಲಿ ಟೈಪ್ ಮಾಡಿದ ಹೆಸರಿನ ಮೇಲೆ ಸೇರಿಸಿ.
ಕಲೆ ಮತ್ತು ಫೋಟೋಗಳು
ನಿಮ್ಮ ಚಿತ್ರಗಳು, ಮುದ್ರಿತ ಕಲೆ ಮತ್ತು ಫೋಟೋಗಳಿಗೆ ನಿಮ್ಮ ಕೈಬರಹದಂತಿರುವ ಗುರುತಿನಿಂದ ಸಹಿ ಮಾಡಿ.
Signafy ಸಹಿಯ ಚಿತ್ರ ರಚಿಸುತ್ತದೆ. ಸಹಿಗಾಗಿ ದಾಖಲೆಗಳನ್ನು ಕಳುಹಿಸುವುದಿಲ್ಲ ಅಥವಾ ಸಹಿ ಮಾಡಿದವರ ಗುರುತು ಪರಿಶೀಲಿಸುವುದಿಲ್ಲ. ಪ್ರಮಾಣೀಕೃತ ಇ-ಸಹಿ ಬೇಕಾಗುವ ಒಪ್ಪಂದಕ್ಕೆ ಅದಕ್ಕಾಗಿಯೇ ನಿರ್ಮಿಸಿದ ಸೇವೆ ಬೇಕು.
ನಿಮ್ಮ ಸಹಿ ನಿಮ್ಮದೇ
ನಿಮ್ಮ ಫೋನ್ನಲ್ಲಿ ಉಳಿಯುತ್ತದೆ
ನನ್ನ ಸಹಿಗಳು ವಿಭಾಗ ನಿಮ್ಮ iPhone ನಲ್ಲೇ ಇದೆ. ಖಾತೆ ಇಲ್ಲ, ನಮ್ಮ ಯಾವುದೇ ಸರ್ವರ್ಗೆ ಏನೂ ಸಿಂಕ್ ಆಗುವುದಿಲ್ಲ.
AI ಗೆ ಏನು ಹೋಗಬೇಕೆಂದು ನೀವೇ ನಿರ್ಧರಿಸಿ
ನಿಮ್ಮ ಹೆಸರು ಅಥವಾ ಬರೆದ ಸಹಿಯನ್ನು ಮೊದಲ ಬಾರಿ AI ಸೇವೆಗೆ ಕಳುಹಿಸುವ ಮೊದಲು ಆ್ಯಪ್ ಕೇಳುತ್ತದೆ, ಪೂರೈಕೆದಾರರ ಹೆಸರನ್ನೂ ತಿಳಿಸುತ್ತದೆ. ಸ್ಕ್ಯಾನ್ ನಿಮ್ಮ ಫೋನ್ನಲ್ಲೇ ಸ್ವಚ್ಛಗೊಳ್ಳುತ್ತದೆ.
ಜಾಹೀರಾತಿಲ್ಲ
Signafy ಜಾಹೀರಾತು ತೋರಿಸುವುದಿಲ್ಲ, ಇತರ ಸಂಸ್ಥೆಗಳ ಆ್ಯಪ್ ಅಥವಾ ವೆಬ್ಸೈಟ್ಗಳಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡುವುದಿಲ್ಲ.
ಜನರು ಕೇಳುವ ಪ್ರಶ್ನೆಗಳು
Signafy ನನಗಾಗಿ PDF ಗೆ ಸಹಿ ಮಾಡಬಹುದೇ?
ಇಲ್ಲ. Signafy ಪಾರದರ್ಶಕ PNG ರೂಪದಲ್ಲಿ ಸಹಿಯ ಚಿತ್ರ ರಚಿಸುತ್ತದೆ. PDF ಸಂಪಾದಕ, Word, Pages ಅಥವಾ Google Docs ನಂತಹ ನಿಮ್ಮ ದಾಖಲೆ ಇರುವ ಆ್ಯಪ್ನಲ್ಲಿ ನೀವು ಆ ಚಿತ್ರ ಇರಿಸಬೇಕು.
ನನ್ನ ಸಹಿಯ ಚಿತ್ರ ಕಾನೂನುಬದ್ಧವಾಗಿ ಮಾನ್ಯವೇ?
ಅದು ದಾಖಲೆ ಮತ್ತು ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿದೆ. ಅನೇಕ ನಿತ್ಯದ ಫಾರ್ಮ್ಗಳು ಸಹಿಯ ಚಿತ್ರ ಸ್ವೀಕರಿಸುತ್ತವೆ. ಕೆಲವು ಒಪ್ಪಂದಗಳಿಗೆ ಸಹಿ ಮಾಡಿದವರ ಗುರುತು ಪರಿಶೀಲಿಸುವ ಪ್ರಮಾಣೀಕೃತ ಇ-ಸಹಿ ಸೇವೆ ಬೇಕು. Signafy ಗುರುತು ಪರಿಶೀಲಿಸುವುದಿಲ್ಲ. ನಿಮ್ಮ ದಾಖಲೆಗೆ ಏನು ಬೇಕೆಂದು ಪರಿಶೀಲಿಸಿ.
Signafy ಉಚಿತವೇ?
Signafy ಡೌನ್ಲೋಡ್ ಉಚಿತ. ಸಹಿ ರಚಿಸಲು, ಸ್ಕ್ಯಾನ್ ಮಾಡಲು ಮತ್ತು ಉಳಿಸಲು Apple ID ಮೂಲಕ ಬಿಲ್ ಆಗುವ ಚಂದಾದಾರಿಕೆ ಬೇಕು. App Store ಸೆಟ್ಟಿಂಗ್ಗಳಲ್ಲಿ ಯಾವಾಗ ಬೇಕಾದರೂ ರದ್ದುಪಡಿಸಬಹುದು.
ಇನ್ನೊಬ್ಬರಿಗೆ ಇದೇ ಸಹಿ ಸಿಗುತ್ತದೆಯೇ?
ಪ್ರತಿ ಬಾರಿಯೂ ನಿಮ್ಮ ಹೆಸರಿನಿಂದ ಹೊಸ ಸಹಿ ರಚನೆಯಾಗುತ್ತದೆ. ಒಂದೇ ಹೆಸರು ಮತ್ತು ಶೈಲಿಯ ಇಬ್ಬರಿಗೂ ಬೇರೆ ಫಲಿತಾಂಶಗಳು ಸಿಗುತ್ತವೆ. ಶೈಲಿಗಳು ಸಾಮಾನ್ಯವಾಗಿವೆ. ಆ್ಯಪ್ ನಿಜವಾದ ವ್ಯಕ್ತಿಯ ಸಹಿಯನ್ನು ಎಂದಿಗೂ ನಕಲಿಸುವುದಿಲ್ಲ.
ನಾನು ಸ್ಕ್ಯಾನ್ ಮಾಡಿದ ಸಹಿಗೆ ಏನಾಗುತ್ತದೆ?
Signafy ನಿಮ್ಮ ಫೋನ್ನಲ್ಲೇ ಕಾಗದದ ಹಿನ್ನೆಲೆ ತೆಗೆಯುತ್ತದೆ. ಸ್ಕ್ಯಾನ್ ಸ್ವಚ್ಛಗೊಳಿಸುವುದು ತುಂಬ ಕಷ್ಟವಾದಾಗ ಮಾತ್ರ AI ಸೇವೆಗೆ ಕಳುಹಿಸುವ ಆಯ್ಕೆ ನೀಡುತ್ತದೆ. ಮೊದಲು ನಿಮ್ಮನ್ನು ಕೇಳುತ್ತದೆ.
ಯಾವ ಫೈಲ್ ಸಿಗುತ್ತದೆ?
ನೀವು ಆರಿಸಿದ ಶಾಯಿಯ ಬಣ್ಣದಲ್ಲಿ, ಪಾರದರ್ಶಕ ಹಿನ್ನೆಲೆಯ PNG. Photos ಅಥವಾ Files ನಲ್ಲಿ ಉಳಿಸಿ ಅಥವಾ ನೇರವಾಗಿ ಬೇರೆ ಆ್ಯಪ್ಗೆ ಹಂಚಿ.